ಸಮಯ: ಎಲ್ಲದರ ಇತಿಹಾಸ ಮತ್ತು ಭವಿಷ್ಯ - ಮರುಮಾದರಿ | Kurzgesagt

🎁Amazon Prime 📖Kindle Unlimited 🎧Audible Plus 🎵Amazon Music Unlimited 🌿iHerb 💰Binance

ವೀಡಿಯೊ

ಸಂವಾದ

ಕಾಲ

ಚಿಕ್ಕ-ಚಿಕ್ಕ ತುಣುಕಾಗಿ ಅರ್ಥವಾಗುತ್ತದೆ

ಆದರೆ, ಅದೇ ಒಂದು ದೊಡ್ಡ ಹಿಂಡಿ ಯಾಗಿ ನೋಡಿದಾಗ

ಊಹಿಸಲೂ ಬಹುತೇಕ ಅಸಾಧ್ಯವಾಗುತ್ತದೆ.

ಹಾಗಾಗಿ, ಚಿಕ್ಕದಾಗೇ ಶುರು ಮಾಡೋಣ

ನಿಮಿಷಗಳು, ಗಂಟೆಗಳು ಹಾಗೂ ದಿನಗಳೊಡನೆ.

ಬಹುಶಃ ನೀವು ಹೋದ 24ಗಂಟೆಗಳಲ್ಲಿ ಬಹುತೇಕ ಕೆಲಸ ಹಾಗೂ ನಿದ್ರಿಸುವುದರಲ್ಲೇ ಕಳೆದಿರುತ್ತೀರಿ,

ಮತ್ತು ನೀವು ನಿನ್ನೆಯ ದೊಡ್ಡ ಭಾಗವನ್ನು ಬಹುಶಃ ವ್ಯರ್ಥ ಮಾಡಿರುತ್ತೀರಿ

ಇಂಟರ್ನೆಟ್ ನಲ್ಲಿ.

ದಿನಗಳು ವಾರಗಳಾಗುತ್ತವೆ, ವಾರಗಳು ತಿಂಗಳುಗಳಾಗುತ್ತವೆ,

ಹಾಗೇ ವರ್ಷವೂ ತುಂಬಿ ಹೋಗುತ್ತದೆ.

2017ನ್ನೇ ನೋಡೋಣ.

ಫ್ರಾನ್ಸ್ ಡ್ರೋನ್ ಗಳನ್ನು ಬೇಟೆಯಾಡಲು ಹದ್ದುಗಳಿಗೆ ತರಬೇತಿ ನೀಡಲಾರಂಭಿಸಿದೆ.

ಜೆಕ್ ರಿಪಬ್ಲಿಕ್ ನಾ ಒಂದು ಅಣುವಿದ್ಯುತ್ ಕಾರ್ಖಾನೆ ಬಿಕಿನಿ ಸ್ಪರ್ಧೆ ಯೊಂದನ್ನು ಆಯೋಜಿಸಿತ್ತು

ಶಿಕ್ಷಾರ್ಥಿಯನ್ನು ಆಯ್ಕೆ ಮಾಡಲು.

ಹಾಗೇ ಅಂತರ್ಜಾಲದ ಮಂದಿ ಸವಾಲೊಂದನ್ನು ಹಾಕಿದ್ದರು

ಬ್ಲೀಚ್ ಅನ್ನು ತಿನ್ನುವುದರ ಮೂಲಕ.

ನಿಮಗೇ ಗೊತ್ತಲ್ಲ, ಮಾಮೂಲಿ ಸುದ್ದಿಗಳು.

ಈಗ ಮತ್ತಷ್ಟು ಹಿಂದೆ ಹೋಗೋಣ

21ನೇ ಶತಮಾನದ ಮೊದಲ ವರ್ಷದಲ್ಲಿ ಜನಿಸಿದ ಮಗುವಿಗೆ

ಈಗ 18 ವರ್ಷ ವಯಸ್ಸು.

ಈ ಶತಮಾನ ಇನ್ನೂ ಎಳೆಯದಾಗೇ ಇದೆ. ನೀನು ದೊಡ್ಡವನಾದರೂ.

ಅದು ಬಹುಪಾಲು 9/11 ದಾಳಿಯಿಂದ ರೂಪಿತವಾಗಿದೆ,

ಅಫ್ಘಾನಿಸ್ತಾನದಲ್ಲಿನ ಯುದ್ಧಕ್ಕೆ ಇದೇ ಮೂಲ ಕಾರಣ.

ಹಾಗೂ ಇರಾಕ್ ನ ಆಕ್ರಮಣಕ್ಕೂ ಕೂಡ.

2011ರ ಮಾರ್ಚ್ ನಲ್ಲಿ,

ಸಿರಿಯಾ ಆಂತರಿಕ ಯುದ್ಧ ಆರಂಭವಾಯಿತು,

ಮತ್ತು ಏಳು ವರ್ಷಗಳ ನಂತರವೂ ಮುಂದುವರಿಯುತ್ತಿದೆ.

ಬಹುತೇಕ ನಾವುಗಳು ಹುಟ್ಟಿದ್ದು 20ನೇ ಶತಮಾನದಲ್ಲಿ.

ಮಾನವ ಇತಿಹಾಸದಲ್ಲೇ ಎರಡು ವಿನಾಶಕಾರಿ ಯಾದ್ಧಗಳನ್ನು

ಮತ್ತು ಒಂದು ಶೀತಲ ಸಮರವನ್ನು ಕಂಡ ಶತಮಾನ.

ಮೊಟ್ಟ ಮೊದಲ ಬಾರಿಗೆ,

ನಮ್ಮನ್ನು ನಾವೇ ಪರಮಾಣು ಶಸ್ತ್ರಾಸ್ತ್ರಗಳಿಂದ ಸಂಪೂರ್ಣ ನಾಶ ಮಾಡಿಕೊಳ್ಳಲು ಶಕ್ತರಾಗಿದ್ದೇವೆ,

ಮತ್ತು ಬಹುತೇಕ ಮಾಡಿಕೊಂಡಿದ್ದೆವೂ ಕೂಡ,

ಹಾಗೆಯೇ ನಮ್ಮ ಬಾಹ್ಯಾಕಾಶ ಸ್ಪರ್ಧೆಯ ಪರಿಣಾಮ, ಮೊದಲ ಬಾರಿಗೆ ನಾವು ಭೂಮಿಯಾಚೆಗೆ ಕಾಲಿಟ್ಟೆವು.

ಅಂತರ್ಜಾಲದ ಆವಿಷ್ಕಾರವೂ ಆಯಿತು,

ಅದು ಮೀಮ್ ಗಳಿಗೆ ದಾರಿ ಮಾಡಿಕೊಟ್ಟಿತು,

ಹಾಗೇ ಫೇಸ್ಬುಕ್ ಮತ್ತು ಟ್ವಿಟ್ಟರ್ ಗೂ ಕೂಡ,

ಒಟ್ಟಿನಲ್ಲಿ ಹೇಳುವುದಾದರೆ,

ಇದು ಒಳ್ಳೆಯ ಬೆಳವಣಿಗೆಯೇ ಎಂಬುದು ನಮಗೆ ಖಚಿತವಾಗಿ ಗೊತ್ತಿಲ್ಲ.

ಒಬ್ಬ ಸಾಮಾನ್ಯ ಮನುಷ್ಯ ಸರಾಸರಿ 79 ವರುಷ ಬದುಕುತ್ತಾನೆ,

ಇದು ಇತ್ತೀಚಿನ ಇತಿಹಾಸದ ಬಹುಪಾಲನ್ನು ಒಳಗೊಳ್ಳುತ್ತದೆ.

ಸದ್ಯಕ್ಕೆ ಬದುಕಿರುವ ಅತಿ ಹಿರಿಯ ವ್ಯಕ್ತಿ ಸೆಲಿನೊ ಜರಾಮಿಲ್ಲೊ,

ಅವರು 1896 ರಲ್ಲಿ ಜನಿಸಿದರು,

ಅಂದರೆ ಅವರ ಜನನ ದಿನವು ನೆಪೋಲಿಯನ್ ಆಳುವ ಯುರೋಪಿಗೆ ಹತ್ತಿರವಾಗಿತ್ತು

ಪ್ರಸ್ತುತ ದಿನಕ್ಕಿಂತ.

ಕೇವಲ 250 ವರ್ಷಗಳ ಹಿಂದೆ,

ಕೈಗಾರಿಕಾ ಕ್ರಾಂತಿ ಜಗತ್ತನ್ನು ಪ್ರಗತಿ ಯಂತ್ರವನ್ನಾಗಿ ಪರಿವರ್ತಿಸಿತು.

ರೈತರು ಕಾರ್ಮಿಕರಾದರು, ಮತ್ತು ಜ್ಞಾನವನ್ನು ವಿತರಿಸಲು ಸುಲಭವಾಯಿತು.

ಈ ಸಮಯದಲ್ಲಿ,

ನಾವು ಇಂದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿರುವ ಪ್ರಗತಿಯನ್ನು ಪ್ರಾರಂಭಿಸಿದ್ದೇವೆ

ವಾಸ್ತವವಾಗಿ, ಅದು ಬಹಳ ಹಿಂದೆಯೇನೂ ಅಲ್ಲ.

ವಿಕಸನದ ಸಿದ್ಧಾಂತವು ನಮ್ಮನ್ನು ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸಿತು

ಮತ್ತು ನಾವು ವಾಸಿಸುವ ಜಗತ್ತನ್ನೂ ಕೂಡ.

ನ್ಯೂಟನ್ ತನ್ನ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ತಿಳಿಸಿದ.

ನಾವು ಕಂಡುಹಿಡಿದೆವು ದೂರದ ನಕ್ಷತ್ರಗಳನ್ನು

ಮತ್ತು ಬಹಳ ಹತ್ತಿರದ ಬ್ಯಾಕ್ಟೀರಿಯಾಗಳನ್ನು.

15 ನೇ ಶತಮಾನವು ಬಹಳ ಘಟನೆಗಳಿಗೆ ಸಾಕ್ಷಿಯಾಗಿತ್ತು.

ಕೊಲಂಬಸ್‌ನ ಅಮೆರಿಕದ “ಆವಿಷ್ಕಾರ”

ಮತ್ತು ಕಾನ್ಸ್ಟಾಂಟಿನೋಪಲ್ ಪತನ

ಇದು ಮಧ್ಯಯುಗ ಅಂತ್ಯದ ಸಂಕೇತವಾಗಿತ್ತು.

ಇನ್ನು ಮಧ್ಯಯುಗದಲ್ಲಿ ಸಂಪೂರ್ಣ ಯುದ್ಧಗಳದ್ದೇ ಆರ್ಭಟ.

ಆದರೆ ಅತಿ ಹೆಚ್ಚು ಬಲಿ ಪಡೆದಿದ್ದು ಒಂದು ರೋಗ.

ಕರಾಳ ಪ್ಲೇಗ್ ಪ್ರತಿ ಮೂರು ಯೂರೋಪಿಯನ್ನರಲ್ಲಿ ಒಬ್ಬನನ್ನು ಬಲಿ ಪಡೆದಿತ್ತು

ಅದೂ, ಕೇವಲ ಆರು ವರ್ಷಗಳಲ್ಲಿ.

ಸುಮಾರು 2,000 ವರ್ಷಗಳ ಹಿಂದೆ,

ನಾವು ಸುಮ್ಮನೆ ಹಾಗೇ ಕ್ಯಾಲೆಂಡರ್‌ನ ವರ್ಷ 1 ಎಂದು ನಿಶ್ಚಯಿಸಿದೆವು

ಅದನ್ನು ಇನ್ನೂ ಬಹುಪಾಲು ಪ್ರಪಂಚ ಇಂದು ಅನುಸರಿಸುತ್ತಿದೆ.

ಆದರೆ ರೋಮನ್ನರಿಗೆ, ಜಗತ್ತು ಆಗಲೇ ಪ್ರಾಚೀನವಾಗಿತ್ತು.

ಗ್ರೇಟ್ ಪಿರಮಿಡ್‌ಗಳನ್ನು 4,500 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು.

ಹಾಗೇ ನೋಡಿದರೆ, ರೋಮನ್ನರಿಗೆ ಪಿರಮಿಡ್ ಗಳು,

ನಮಗೆ ರೋಮನ್ನರು ಎಷ್ಟು ಹಳಬರೋ ಅದಕ್ಕಿಂತಲೂ ಹಳೆಯದಾಗಿದ್ದವು.

ಬಹಳ ಹಿಂದೆಯೇ,

ಭೂಮಿಯ ಮೇಲೆ ಇನ್ನೂ ಜೀವಂತ ಬೃಹದ್ಗಜಗಳು ಇದ್ದವು.

ಇನ್ನೂ ಸಾಕಷ್ಟು ಇತಿಹಾಸ ಅದಕ್ಕೂ ಮೊದಲೇ ಸಂಭವಿಸಿದೆ.

ಸುಮಾರು 7,000 ವರ್ಷಗಳ ಹಿಂದೆ,

ಮಾನವರು ಬರೆಯಲು ಪ್ರಾರಂಭಿಸಿದರು.

ಸುಮಾರು 12,000 ವರ್ಷಗಳ ಹಿಂದೆ,

ಮಾನವ ಸಂಘಟನೆ ಸ್ಫೋಟಗೊಂಡಿತು.

ನಾವು ನಮ್ಮ ಮೊದಲ ದೇವಾಲಯವನ್ನು ನಿರ್ಮಿಸಿದೆವು,

ಮತ್ತು ಪ್ರಪಂಚದಾದ್ಯಂತ, ಮಾನವಕುಲವು ಕೃಷಿಯನ್ನು ಪ್ರಾರಂಭಿಸಿತು,

ಇದು ದೊಡ್ಡ ಸಮುದಾಯಗಳ ಉಗಮಕ್ಕೆ ಅನುವು ಮಾಡಿಕೊಟ್ಟಿತು.

ಭೂಮಿಯ ಮೇಲೆ ನಮ್ಮ ಪ್ರಾಬಲ್ಯ ನಿಜವಾಗಿಯೂ ಇಲ್ಲಿಂದ ಪ್ರಾರಂಭವಾಗುತ್ತದೆ.

ಹೋಮೋ ಸೇಪಿಯನ್ಸ್ ಸೇಪಿಯನ್ಸ್, ಆಧುನಿಕ ಮಾನವ,

ಕನಿಷ್ಠ 200,000 ವರ್ಷಗಳ ಹಿಂದೆ ವಿಕಸನಗೊಂಡನು.

50,000 ವರ್ಷಗಳ ಹಿಂದೆ,

ಅರಿವಿನ ಕ್ರಾಂತಿ ನಮ್ಮ ಮನಸ್ಸನ್ನು ಮತ್ತು ನಾವೀನ್ಯತೆಯನ್ನು ವಿಸ್ತರಿಸಿತು.

ಆಗ, ನಾವು ಭೂಮಿಯನ್ನು ಕನಿಷ್ಠ ಐದು ಇತರ ಮಾನವ ಜಾತಿಗಳೊಂದಿಗೆ ಹಂಚಿಕೊಂಡಿದ್ದೆವು

ನಂತರ, ಅವುಗಳು ನಶಿಸಿ ಹೋದವು ಅಥವಾ ನಮ್ಮಿಂದ ಕೊಲ್ಲಲ್ಪಟ್ಟವು.

ಕನಿಷ್ಠ 2 ದಶಲಕ್ಷ ವರ್ಷಗಳ ಹಿಂದೆ,

ನಮ್ಮ ಪೂರ್ವಜರು ಆಗಾಗಲೇ ಬೆಂಕಿಯ ಮೇಲೆ ನಿಯಂತ್ರಣ ಹೊಂದಿದ್ದರು

ಹಾಗೂ ಮರ ಮತ್ತು ಕಲ್ಲಿನಿಂದ ಉಪಕರಣಗಳನ್ನು ನಿರ್ಮಿಸುವುದನ್ನು ಕಲಿತಿದ್ದರು.

ಮತ್ತು 6 ದಶಲಕ್ಷ ವರ್ಷಗಳ ಹಿಂದೆ,

ಚಿಂಪಾಂಜಿಗಳು ಮತ್ತು ಮಾನವರ ಕೊನೆಯ ಸಾಮಾನ್ಯ ಪೂರ್ವಜರು ಬದುಕಿದ್ದರು.

ಆದ್ದರಿಂದ ಈ ಗ್ರಾಫ್ ಸಂಪೂರ್ಣ ಮಾನವ ಇತಿಹಾಸವನ್ನು ಸೂಚಿಸುತ್ತದೆ.

ನಮ್ಮ ಆಪ್ತ ಸಂಬಂಧಿಗಳಾದ ಹೋಮೋ ಎರೆಕ್ಟಸ್,

ನಮಗಿಂತಲೂ10 ಪಟ್ಟು ಹೆಚ್ಚು ಕಾಲ ಈ ಭೂಮಿಯ ಮೇಲೆ ಬದುಕಿದ್ದರು.

ಈ ಸಣ್ಣ ಭಾಗ ಮಾನವ ಯುಗ.

ನಾವು ಸಾಕಷ್ಟು ಝೂಮ್ ಮಾಡಬೇಕು (ಸಮೀಪಿಕರಿಸಬೇಕು)

ನಿಮ್ಮ ಜೀವಿತಾವಧಿಯನ್ನು ನೋಡಲು.

ಇಷ್ಟೆಲ್ಲಾ ಆದರೂ, ಮಾನವ ಇತಿಹಾಸವೆಲ್ಲವೂ ಅಷ್ಟೇನೂ ದೀರ್ಘಕಾಲವಾಗಿಲ್ಲ.

65 ದಶಲಕ್ಷ ವರ್ಷಗಳ ಹಿಂದೆ,

ಡೈನೋಸಾರ್‌ಗಳ ಯುಗವು ಅಗಾಧವಾದ ಸ್ಫೋಟದಲ್ಲಿ ಕೊನೆಗೊಂಡಿತು.

ಡೈನೋಸಾರ್‌ಗಳು ಭೂಮಿಯನ್ನು ಆಳಿದವು

ಸುಮಾರು 165 ದಶಲಕ್ಷ ವರ್ಷಗಳವರೆಗೆ.

ಅದು ಎಲ್ಲಾ ಮಾನವ ಇತಿಹಾಸಕ್ಕಿಂತ 27 ಪಟ್ಟು ಹೆಚ್ಚು ಕಾಲಕ್ಕೆ ಸಮ.

ಅದು ಬಹಳ ದೀರ್ಘವಾಗಿದೆ,

ಇದರರ್ಥ 65 ದಶಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದ ಟಿ-ರೆಕ್ಸ್

ಇಂದು ನಮಗೆ ಹತ್ತಿರವಾಗಿದೆ

ಬದುಕಿದ್ದ ಸ್ಟೆಗೊಸಾರಸ್ ಗೆ ಹೋಲಿಸಿದರೆ.

ಪ್ರಬಲವಾದ ಕೋಳಿಗಳ ರೂಪದಲ್ಲಿ ಡೈನೋಸಾರ್‌ಗಳು

ಇಂದಿಗೂ ನಮ್ಮ ಸುತ್ತಲೂ ಬದುಕಿದ್ದಾವೆ.

ಈ ಗ್ರಹದಲ್ಲಿ ಪ್ರಾಣಿಗಳ ಜೀವನ 600 ದಶಲಕ್ಷ ವರ್ಷಗಳ ಹಿಂದೆ ಪ್ರಾರಂಭವಾಯಿತು.

ಇದರಲ್ಲಿ ಆರಂಭಿಕ ಪ್ರಾಣಿಗಳು ಮೀನು ಮತ್ತು ಇತರ ಸಣ್ಣ ಸರಳ ಸಮುದ್ರ ಜೀವಿಗಳು,

ನಂತರ ಕೀಟಗಳು, ನಂತರ ಸರೀಸೃಪಗಳ ಆಗಮನವಾಯಿತು

ಮತ್ತು ಅಂತಿಮವಾಗಿ, ಸುಮಾರು 200 ದಶಲಕ್ಷ ವರ್ಷಗಳ ಹಿಂದೆ,

ಸಸ್ತನಿಗಳ ಉಗಮವಾಯಿತು.

ಜೀವ ಸಂಕುಲದ ಜನನ ಇನ್ನೂ ಬಹಳ ಆರಂಭವಾಗಿತ್ತು.

ನಮಗೆ ದೊರಕಿರುವ ಪುರಾವೆಗಳ ಪ್ರಕಾರ ಜೀವಿಗಳು ಮೊದಲು ಕಾಣಿಸಿಕೊಂಡಿದ್ದು

4.1ಶತಕೋಟಿ ವರ್ಷಗಳ ಹಿಂದೆ.

ಕನಿಷ್ಠ 3.5 ಶತಕೋಟಿ ವರ್ಷಗಳವರೆಗೆ,

ಜೀವನವು ಏಕಕೋಶೀಯ ಜೀವಿಗಳನ್ನು ಮಾತ್ರ ಒಳಗೊಂಡಿತ್ತು.

4.5 ಶತಕೋಟಿ ವರ್ಷಗಳ ಹಿಂದೆ,

ಸೂರ್ಯನು ದೈತ್ಯಾಕಾರದ ಅಂತಃಸ್ಪೋಟವಾದ ಅನಿಲ ಮೋಡದಿಂದ ಜನಿಸಿದನು.

60 ದಶಲಕ್ಷ ವರ್ಷಗಳ ನಂತರ, ಭೂಮಿಯು ರೂಪುಗೊಂಡಿತು.

ಆ ಆರಂಭಿಕ ವರ್ಷಗಳಲ್ಲಿ,

ಆಗಾಗ್ಗೆ ಅಪ್ಪಳಿಸಿದ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು

ಭೂಮಿಗೆ ದೊಡ್ಡ ಸಾಗರಗಳನ್ನು ಪೂರೈಸಿದವು.

ಆದರೆ ಇಡೀ ವಿಶ್ವಕ್ಕೆ ಹೋಲಿಸಿದರೆ,

ನಮ್ಮ ಸೌರವ್ಯೂಹವು ಹೊಸತು.

13.75 ಶತಕೋಟಿ ವರ್ಷಗಳ ಹಿಂದೆ,

ವಿಶ್ವದ ಜನನವಾಯಿತು.

ಮತ್ತು ಸುಮಾರು ಅರ್ಧ ಶತಕೋಟಿ ವರ್ಷಗಳ ನಂತರ,

ನಮ್ಮ ಸ್ವಂತ ನಕ್ಷತ್ರಪುಂಜವು ಶತಕೋಟಿ ನಕ್ಷತ್ರಗಳಿಂದ ರೂಪುಗೊಂಡಿತು.

ಆದರೆ ಬಿಗ್ ಬ್ಯಾಂಗ್ ಮೊದಲು ಏನಿತ್ತು?

ಸತ್ಯವೇನೆಂದರೆ…

ನಮಗೆ ಗೊತ್ತಿಲ್ಲ, ಮತ್ತು ಬಹುಶಃ ನಮಗೆಂದೂ ಗೊತಾಗುವುದೂ ಇಲ್ಲ.

ಮತ್ತು ನಿಮಗಲ್ಲಿಗೆ ತಿಳಿಯಿತು…

ಗತಕಾಲದ ಬಗ್ಗೆ.

ಈಗ ಭವಿಷ್ಯದ ಬಗ್ಗೆ ನಮಗೆ ತಿಳಿದಿರುವುದನ್ನು ನೋಡೋಣ.

ಸರಿಸುಮಾರು 1 ಬಿಲಿಯನ್ ವರ್ಷಗಳಲ್ಲಿ,

ಸೂರ್ಯನ ಉಷ್ಣವು ಎಷ್ಟು ಏರಿಕೆಯಾಗುತ್ತದೆ ಎಂದರೆ

ಭೂಮಿಯ ಮೇಲಿನ ಜೀವನ ಅಸಾಧ್ಯವಾಗುತ್ತದೆ.

4 ಶತಕೋಟಿ ವರ್ಷಗಳ ನಂತರ ಸೂರ್ಯನ ಮರಣ

ಸೌರಮಂಡಲದ ಜೀವಿಗಳ ಅಂತ್ಯವನ್ನು ಸೂಚಿಸುತ್ತದೆ.

ನಮಗೆ ಬದುಕಲು ಅವಕಾಶ ಬೇಕಾದರೆ,

ನಾವು ಇನ್ನಿತರ ನಕ್ಷತ್ರಗಳಿಗೆ ಪಯಣಿಸುವ ಸಾಹಸ ಮಾಡಬೇಕಾಗುತ್ತದೆ.

ಮತ್ತು ಅದರ ನಂತರ ಏನಾಗುತ್ತದೆ?

ಮುಂದಿನ 100 ಶತಕೋಟಿ ವರ್ಷಗಳಲ್ಲಿ,

ಸುತ್ತಮುತ್ತಲಿನ ಬೃಹತ್ ನಕ್ಷತ್ರಗಳು ಸಾಯುತ್ತವೆ.

ವಿಶ್ವವು ಕಾಲ ಉರುಳಿದಂತೆ ಮಂಕಾಗುತ್ತದೆ,

ಸಣ್ಣ ಕೆಂಪು ಮತ್ತು ಬಿಳಿ ಕುಬ್ಜ ನಕ್ಷತ್ರಗಳಿಂದ ಮಾತ್ರ ಬೆಳಕು ಉಳಿದಿರುತ್ತದೆ.

ಆದರೆ ಅವುಗಳು ಕೂಡ ಅಂತಿಮವಾಗಿ ದಹಿಸಿ ನಶಿಸಿ ಹೋಗುತ್ತವೆ

ಮತ್ತು ಒಂದು ದಿನ …

ವಿಶ್ವದ ಕೊನೆಯ ನಕ್ಷತ್ರವೂ ಮರಣ ಹೊಂದುತ್ತದೆ.

ವಿಶ್ವದೆಲ್ಲೆಡೆ ಕಡು ಕತ್ತಲೆ ಆವರಿಸುತ್ತದೆ,

ಯಾವುದೋ ಕೆಲ ಸಮಯದಲ್ಲಿ,

ಕಪ್ಪು ರಂಧ್ರ ಗಳು ಸಹ ಆವಿಯಾಗಿ ನಶಿಸುತ್ತವೆ.

ಹಾಗಾದಾಗ, ವಿಶ್ವವು ಅದರ ಅಂತಿಮ ಹಂತವನ್ನು ತಲುಪುತ್ತದೆ:

ಉಷ್ಣ ಮರಣ.

ಇನ್ನು ಏನೂ ಬದಲಾಗುವುದಿಲ್ಲ; ವಿಶ್ವದ ಅವಸಾನವಾಗಿದೆ.

ಶಾಶ್ವತವಾಗಿ.

ನೀವು ಇದೀಗ ಕೆಲವು ವಿಲಕ್ಷಣ ಭಾವನೆಗಳನ್ನು ಅನುಭವಿಸುತ್ತಿದ್ದೀರಿ, ಅಲ್ಲವೇ?

ನಾವೂ ಕೂಡ.

ಇದು ಸಹಜ.

ಶುಭ ಸುದ್ದಿ ಏನೆಂದರೆ

ಇದೆಲ್ಲವೂ ಸಂಭವಿಸುವುದಕ್ಕೆ ಇನ್ನೂ ಬಹಳ ಕಾಲ ಬೇಕಾಗಿದೆ.

ವಾಸ್ತವವಾಗಿ ಮುಖ್ಯವಾದ ಸಮಯವೆಂದರೆ

ಈ ಕ್ಷಣ.

ಹಾಗಾಗಿ, ಹೋಗಿ ನೀವು ಇಷ್ಟ ಪಡುತ್ತಿರುವ ಆ ಮುದ್ದಾದ ಹುಡುಗಿ ಅಥವಾ ಹುಡುಗನನ್ನು

ಹೊರ ಹೋಗೋಣವೆ ಎಂದು ಕೇಳಿ

ಸಮಯವು ಅಮೂಲ್ಯವಾದುದು.

ಖುಷಿಯಾಗಿರಿ!!

ನಾವು ಹೆಚ್ಚು ಕೇಳುವ ಪ್ರಶ್ನೆಯೆಂದರೆ ನಾವು ಅನಿಮೇಟೆಡ್ ವೀಡಿಯೊಗಳನ್ನು ಹೇಗೆ ತಯಾರಿಸುತ್ತೇವೆ ಎಂಬುದು.

ಸಣ್ಣ ಉತ್ತರವೆಂದರೆ ಅಡೋಬ್ ಆಫ್ಟರ್ ಎಫೆಕ್ಟ್ಸ್ ಮತ್ತು ವರ್ಷಗಳ ತರಬೇತಿಯೊಂದಿಗೆ.

ಆದರೆ ನೀವು ಒಂದು ನೋಟವನ್ನು ಪಡೆಯಲು ಬಯಸಿದರೆ,

ನಾವು ಸ್ಕಿಲ್‌ಶೇರ್ ಟ್ಯುಟೋರಿಯಲ್ ಮಾಡಿದ್ದೇವೆ,

ನಮ್ಮ ವೀಡಿಯೊಗಳ ದೃಶ್ಯಗಳನ್ನು ನಾವು ಹೇಗೆ ಅನಿಮೇಟ್ ಮಾಡುತ್ತೇವೆ ಎಂಬುದನ್ನು ವಿವರವಾಗಿ ವಿವರಿಸುತ್ತದೆ.

ನಿಮಗೆ ಈಗಾಗಲೇ ಪರಿಚಯವಿಲ್ಲದಿದ್ದರೆ,

ಸ್ಕಿಲ್‌ಶೇರ್ 18,000 ಕ್ಕೂ ಹೆಚ್ಚು ತರಗತಿಗಳನ್ನು ಹೊಂದಿರುವ ಆನ್‌ಲೈನ್ ಕಲಿಕಾ ಸಮುದಾಯವಾಗಿದೆ

ಬರವಣಿಗೆ, ಅನಿಮೇಷನ್ ಮತ್ತು ವೀಡಿಯೊ ಸಂಪಾದನೆಯಂತಹ ವಿಷಯಗಳಲ್ಲಿ.

ಅವರ ಪ್ರೀಮಿಯಂ ಸದಸ್ಯತ್ವವು ನಿಮಗೆ ಅನಿಯಮಿತ ಪ್ರವೇಶವನ್ನು ನೀಡುತ್ತದೆ

ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಂದ ಉತ್ತಮ-ಗುಣಮಟ್ಟದ ತರಗತಿಗಳಿಗೆ

ಆದ್ದರಿಂದ ನಿಮ್ಮ ಕೌಶಲ್ಯಗಳನ್ನು ನೀವು ಸುಧಾರಿಸಬಹುದು,

ಹೊಸ ಅವಕಾಶಗಳನ್ನು ಅನ್ಲಾಕ್ ಮಾಡಿ,

ಮತ್ತು ನೀವು ನಿಜವಾಗಿಯೂ ಆನಂದಿಸುವ ಕೆಲಸವನ್ನು ಮಾಡಿ.

ಇದು ಅತ್ಯಂತ ಒಳ್ಳೆ.

ವಾರ್ಷಿಕ ಚಂದಾದಾರಿಕೆ ತಿಂಗಳಿಗೆ $ 10 ಕ್ಕಿಂತ ಕಡಿಮೆ.

ಸೈನ್ ಅಪ್ ಮಾಡಿದ ಮೊದಲ 1,000 ಜನರು

ಅವರ ಮೊದಲ ಎರಡು ತಿಂಗಳುಗಳನ್ನು ಕೇವಲ 99 ಸೆಂಟ್ಸ್‌ಗೆ ಪಡೆಯಿರಿ.

ಆದ್ದರಿಂದ ನೀವು ಹೊಸ ವಿಷಯಗಳನ್ನು ಕಲಿಯಲು ಮತ್ತು ಕುರ್ಜ್‌ಸಾಗಾಟ್ ಅನ್ನು ಬೆಂಬಲಿಸಲು ಬಯಸಿದರೆ,

ಒಮ್ಮೆ ಪ್ರಯತ್ನಿಸಿ,

ಈ ರೀಮೇಕ್ ನಿಮಗೆ ಹೇಗೆ ಇಷ್ಟವಾಯಿತು?

ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ನಮ್ಮ ಕೆಲವು ಹಳೆಯ ವೀಡಿಯೊಗಳನ್ನು ಮತ್ತೆ ಮಾಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ

ನೀವು ಮತ್ತೆ ನೋಡಲು ಬಯಸುವ ಯಾವುದೇ ವೀಡಿಯೊಗಳು?

As an Amazon Associate I earn from qualifying purchases 🛒
ಇದರೊಂದಿಗೆ ನಿರ್ಮಿಸಲಾಗಿದೆ (ノ◕ヮ◕)ノ🪄💞💖🥰 across the gl🌍🌏🌎be