ವೀಡಿಯೊ
ಸಂವಾದ
2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ಅಧಿಕಾರಿಗಳು
ತಮ್ಮ ದೇಶದ ಸಮುದಾಯಗಳಲ್ಲಿ ಹರಿದಾಡುತ್ತಿರುವ ಒಂದು ವೈರಾಣುವಿನ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದರು
ಕೆಲವೇ ತಿಂಗಳುಗಳಲ್ಲಿ ಈ ವೈರಾಣು ಇತರ ದೇಶಗಳಿಗೆ ಹರಡಿತು.ಕೆಲವೇ ದಿನಗಳಲ್ಲಿ ಸೋಂಕಿತರ ಸಂಖೆೃ ದ್ವಿಗುಣಗೊಳಿಸತೊಡಗಿತು.
ಈ ವೈರಾಣುವಿನ ಹೆಸರು “ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೊಮ್ ರಿಲೇಟೆಡ್ ಕೊರೊನಾ ವೈರಸ್ -೨
ಇದು “ಕೋವಿಡ್ ೧೯” ಎಂಬ ರೋಗವನ್ನು ಉಂಟುಮಾಡುತ್ತದೆ. ಜನರು ಇದನನ್ನು ಕೊರೊನಾ ವೈರಸ್ ರೋಗವೆಂದು ಕರೆಯುತ್ತಾರೆ
ಇದು ಮಾನವನ ದೇಹದಲ್ಲೇನು ಮಾಡುತ್ತದೆ? ನಾವೆಲ್ಲರು ಏನು ಮಾಡಬೇಕು?
ಮೊದಲು ವೈರಸ್ ಎಂದರೆ ಏನೆಂದು ತಿಳಿಯೋಣ. ಆನುವಂಶಿಕ ವಸ್ತುವಿನ ಸುತ್ತ ಪ್ರೋಟೀನ್ ಹಾಗು ಕೊಬ್ಬಿನ ಪದರ ಇರುವ ಜೀವಾಣುವನ್ನು ವೈರಸ್ ಎಂದು ಕರೆಯುತ್ತಾರೆ. ವಿಜ್ಞಾನಿಗಳು ಇದನ್ನು ಜೀವಾಣು ಎಂದು ಪರಿಗಣಿಸುವುದಲ್ಲ .
ಏಕೆಂದರೆ ಇದು ಬೇರೆ ಜೀವಿಗಳ ದೇಹದಲ್ಲಿ ಸೇರಿದ ಮೇಲೆಯೇ ಜೀವಿತವಾಗುತ್ತದೆ
ಕೊರೊನಾ ವೈರಸ್ ವಸ್ತುಗಳ ಮೇಲ್ಮೈಗಳಿಂದ ಹರಡಬಲ್ಲದು
ಆದರೆ ಮೇಲ್ಮೈಗಳಲ್ಲಿ ವೈರಸ್ ಎಷ್ಟು ಸಮಯದ ಕಾಲ ಜೀವಿತವಾಗೆರುತ್ತದೆಂದು ಇನ್ನೂ ಸ್ಪಷ್ಟವಾಗಿಲ್ಲ
ಇದರ ಹರಡುವಿಕೆಯ ಮುಖ್ಯ ಮಾರ್ಗವೆಂದರೆ ರೋಗಿಯ ಕೆಮ್ಮು ಮತ್ತು ಸೀನಿನಿಂದ ಹರಡುವ ಹನಿಗಳು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ನೀವು ಸ್ಪರ್ಶಿಸಿ ನಂತರ ನಿಮ್ಮ ಮುಖವನ್ನು ಸ್ಪರ್ಶಿಸಿದರೆ ವೈರಾಣು ಹರಡುತ್ತದೆ.
ಉದಾಹರಣೆಗೆ ನಿಮ್ಮ ಕಣ್ಣು ಅಥವಾ ಮೂಗು ಉಜ್ಜುವುದು.
ವೈರಸ್ ತನ್ನ ಪ್ರಯಾಣವನ್ನು ಇಲ್ಲಿ ಪ್ರಾರಂಭಿಸುತ್ತದೆ, ತದನಂತರ ದೇಹಕ್ಕೆ ಆಳಕ್ಕೆ ಸವಾರಿಯನ್ನು ಮಾಡುತ್ತದೆ.
ಇದು ಶ್ವಾಸಕೋಶದ ಮೇಲೆ ತೀವ್ರ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
ಕಡಿಮೆ ಸಂಖ್ಯೆಯಲ್ಲಿ ಸಹ ಈ ವೈರಸ್‌ಗಳು ಗಂಭೀರ ಪರಿಣಾಮಗಳನ್ನು ಬೀರುತ್ತವೆ
ಶ್ವಾಸಕೋಶವು ಹಲವಾರು ಜೀವಕೋಶಗಳಿಂದ ಅಥವಾ ಸೆಲ್ಲುಗಳಿಂದ ಕೊಡಿದೆ
ಈ ವೈರಾಣು ಸೆಲ್ ಗ್ರಾಹಕಗಳಿಗೆ ಅಂಟಿಕೊಂಡು ತನ್ನ ಆನುವಂಶಿಕ ವಸ್ತುವನ್ನು ಕೋಶದ ಒಳಗೆ ದೂಡುತ್ತದೆ
ಆಮೇಲೆ ಸೆಲ್ ವೈರಲ್ ಆನುವಂಶಿಕ ವಸ್ತುವನ್ನು ನಕಲಿಸುತ್ತದೆ
ವೈರಾಣುವಿನ ಪ್ರತಿಗಳು ಜೀವಕೋಶದ ತುಂಬ ಹರಡುತ್ತದೆ.
ಕೋಶವು ಪ್ರತಿಗಳಿಂದ ತುಂಬಿದ ನಂತರ ಅದು ಸಾಯುತ್ತದೆ
ಹೀಗೆ ಸತ್ತ ಜೀವಕೋಶದಿಂದ ಸಾವಿರಾರು ವೈರಾಣುಗಳು ಬಿಡುಗಡೆಯಾಗುತ್ತದೆ
ಸೋಂಕಿತ ಕೋಶಗಳ ಸಂಖ್ಯೆ ಹೆಚ್ಚು ಆಗುತ್ತದೆ
ಹತ್ತು ದಿನಗಳಲ್ಲಿ ಸೋಂಕಿತ ಕೋಶಗಳ ಸಂಖ್ಯೆ ಶತಕೋಟಿ ತಲುಪುತ್ತದೆ ಮತ್ತು ಶ್ವಾಸಕೋಶವನ್ನು ಹಿಂಡು ಮಾಡುತ್ತದೆ
ಇದರ ನಂತರ ಕರೋನಾ ವೈರಸ್ ದೇಹದ ಮತ್ತೊಂದು ವ್ಯವಸ್ಥೆಯನ್ನು ಆಕ್ರಮಿಸುತ್ತದೆ
ಅದುವೇ ನಿಮ್ಮ ನಿರೋಧಕ ವ್ಯವಸ್ಥೆ
ಪ್ರತಿರಕ್ಷಣಾ ವ್ಯವಸ್ಥೆಯು ಶ್ವಾಸಕೋಶಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತದೆ ಆದರೆ ಪ್ರಕ್ರಿಯೆಯಲ್ಲಿ ಅದನ್ನು ಹಾನಿಗೊಳಿಸುತ್ತದೆ. ಅದು ಹೇಗೆ ಸಂಭವಿಸುತ್ತದೆ ಎಂಬುದನ್ನು ನಾವು ನೋಡೋಣ
ಕರೋನಾ ವೈರಸ್ ಪ್ರತಿರಕ್ಷಣಾ ಸೆಲ್ ಗಳನ್ನು ಪ್ರವೇಶಿಸಿ ಗೊಂದಲವನ್ನು ಸೃಷ್ಟಿಸುತ್ತದೆ
ಜೀವಕೋಶಗಳಿಗೆ ಅಥವಾ ಸೆಲ್ ಗಳಿಗೆ ಕಣ್ಣುಗಳು ಅಥವಾ ಕಿವಿಗಳು ಇರುವುದಿಲ್ಲ
ಅವರು ಸೈಟೊಕಿನ್ಗಳು ಎಂಬ ರಾಸಾಯನಿಕಗಳ ಮೂಲಕ ಸಂವಹನ ನಡೆಸುತ್ತವೆ
ಸೈಟೊಕಿನ್ಗಳು ಎಲ್ಲಾ ರೋಗನಿರೋಧಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತವೆ
ಕರೋನಾ ವೈರಸ್ ನಮ್ಮ ರೋಗನಿರೋಧಕ ವ್ಯವಸ್ಥೆಯು ಅತಿಯಾಗಿ ಪ್ರತಿಕ್ರಿಯಿಸಲು ಕಾರಣವಾಗುತ್ತದೆ
ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಅಗತ್ಯಕ್ಕಿಂತ ಹೆಚ್ಚಿನ ಕೋಶಗಳನ್ನು ಕಳುಹಿಸಲು ಪ್ರೇರೇಪಿಸುತ್ತದೆ. ಈ ಕೋಶಗಳ ಶ್ವಾಸಕೋಶಕ್ಕೆ ಭಾರಿ ಪ್ರಮಾಣದ ಹಾನಿ ಉಂಟುಮಾಡುತ್ತವೆ
ಈ ಪ್ರಕ್ರಿಯೆಯಲ್ಲಿ ಎರಡು ರೀತಿಯ ಜೀವಕೋಶಗಳು ಭಾಗವಹಿಸುತ್ತವೆ
ಮೊದಲನೇಯದು ನ್ಯೂಟ್ರೋಫಿಲ್ಗಳು. ಒಂದು ರೀತಿಯ ಕೊಲ್ಲುವ ಯಂತ್ರ. ಅದು ಇತರ ಕೋಶಗಳನ್ನು ಕೊಲ್ಲುತ್ತದೆ
ಅವು ಶ್ವಾಸಕೋಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹವಾಗುತ್ತವೆ ಮತ್ತು ವಿನಾಶಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ.
ಎರಡನೇ ವಿಧದ ಸೆಲ್‌ಗಳು ಟಿ ಕಿಲ್ಲರ್ ಕೋಶಗಳಾಗಿವೆ. ಅವು ಸೋಂಕಿತ ಕೋಶಗಳನ್ನು ಆತ್ಮಹತ್ಯೆಗೆ ಕಾರಣವಾಗುತ್ತವೆ
ಇದರ ಮಧ್ಯದಲ್ಲಿ ಆರೋಗ್ಯಕರ ಕೋಶಗಳು ಸಹ ಕೊಲ್ಲಲ್ಪಡುತ್ತದೆ
ಹೆಚ್ಚು ರೋಗನಿರೋಧಕ ಕೋಶಗಳು ಬರುತ್ತವೆ ಮತ್ತು ಹೆಚ್ಚು ಹೆಚ್ಚು ಆರೋಗ್ಯಕರ ಶ್ವಾಸಕೋಶದ ಅಂಗಾಂಶಗಳನ್ನು ಕೊಲ್ಲುತ್ತವೆ
ಇದು ಶ್ವಾಸಕೋಶದಲ್ಲಿ ಆಜೀವ ತೊಂದರೆಯನ್ನು ಉಂಟುಮಾಡಬಹುದು
ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಅದರ ನಿಯಂತ್ರಣವನ್ನು ಮರಳಿ ಪಡೆಯುತ್ತದೆ
ಇದು ಸೋಂಕಿತ ಕೋಶಗಳನ್ನು ಕೊಲ್ಲುತ್ತದೆ ಮತ್ತು ವೈರಸ್‌ಗಳು ಆರೋಗ್ಯಕರ ಕೋಶಗಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ
ಚೇತರಿಕೆ ಪ್ರಾರಂಭವಾಗುತ್ತದೆ
ಕೊರೊನಾವೈರಸ್ ಸೋಂಕಿನ ಹೆಚ್ಚಿನ ಜನರು ಇದರ ಪರಿಣಾಮವಾಗಿ ಕಡಿಮೆ ಲಕ್ಷಣಗಳು ಮಾತ್ರ ಹೊಂದಿರುತ್ತಾರೆ ಮತ್ತು ಚೇತರಿಸಿಕೊಳ್ಳುತ್ತಾರೆ
ಆದರೆ ಕೆಲವು ರೋಗಿಗಳು ಗಂಭೀರ ಪರಿಸ್ಥಿತಿ ತಲುಪಬಹುದು
ತೀವ್ರತರವಾದ ಪ್ರಕರಣಗಳಲ್ಲಿ
ಹಲವಾರು ಶ್ವಾಸಕೋಶದ ಸೆಲ್ಗಳು ಸತ್ತು ಹೋಗಿರುತ್ತವೆ.
ಶ್ವಾಸಕೋಶದಲ್ಲಿನ ಅಲ್ವಿಯೋಲಿ ಅನಿಲ ವಿನಿಮಯ ನಡೆಯುವ ಸಣ್ಣ ಚೀಲಗಳಾಗಿವೆ. ಅಂತಹ ರೋಗಿಗಳಲ್ಲಿ ಸಾಮಾನ್ಯವಾಗಿ ಶ್ವಾಸಕೋಶದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ನ್ಯುಮೋನಿಯಾ ಉಂಟಾಗುತ್ತದೆ. ವೈರಸ್ ಕೂಡ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ
ರೋಗಿಗೆ ನ್ಯುಮೋನಿಯಾ ಹೀಗೆ ಉಂಟಾಗುತ್ತದೆ
ರೋಗಿಗೆ ಉಸಿರಾಟವು ಹೆಚ್ಚು ಕಷ್ಟಕರವಾಗುತ್ತದೆ ಮತ್ತು ರೋಗಿಗೆ ಉಸಿರಾಟಕ್ಕೆ ವೆಂಟಿಲೇಟರ್ ಅಗತ್ಯವಿರುತ್ತದೆ
ರೋಗ ನಿರೋಧಕ ವ್ಯವಸ್ಥೆಯು ಈಗಾಗಲೇ ದೀರ್ಘಕಾಲದವರೆಗೆ ಪೂರ್ಣ ಸಾಮರ್ಥ್ಯದಲ್ಲಿ ಹೋರಾಡಿದೆ ಮತ್ತು ಬ್ಯಾಕ್ಟೀರಿಯಾದ ಆಕ್ರಮಣವು ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ
ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಸಂಖ್ಯೆ ಹೆಚ್ಚಾದಂತೆ ರೋಗನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತದೆ
ಬ್ಯಾಕ್ಟೀರಿಯಾ ರಕ್ತಕ್ಕೆ ಪ್ರವೇಶಿಸಿದಾಗ ಈ ಸ್ಥಿತಿಯನ್ನು ಸೆಪ್ಸಿಸ್ ಎಂದು ಕರೆಯಲಾಗುತ್ತದೆ ಮತ್ತು ಅದು ಸಂಭವಿಸಿದಲ್ಲಿ ಸಾವು ಸಂಭವಿಸುವ ಸಾಧ್ಯತೆಯಿದೆ
ಕರೋನವೈರಸ್ ಅನ್ನು ಸಾಮಾನ್ಯವಾಗಿ ಸಾಮಾನ್ಯ ಶೀತಕ್ಕೆ ಹೋಲಿಸಲಾಗುತ್ತದೆ ಆದರೆ ಇದು ಸಾಮಾನ್ಯ ಶೀತಕ್ಕಿಂತ ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿ
ಇದು ನೆಗಡಿಗಿಂತ ಹೆಚ್ಚು ಸಾಂಕ್ರಾಮಿಕ ಮತ್ತು ವೇಗವಾಗಿ ಹರಡುತ್ತದೆ
ಕೋವಿಡ್ 19 ರೋಗ ಸಾಂಕ್ರಾಮಿಕವು ಎರಡು ರೀತಿಯಲ್ಲಿ ಮುಂದುವರಿಯಬಹುದು: ವೇಗದ ಮತ್ತು ನಿಧಾನ ಸಾಂಕ್ರಾಮಿಕ ರೋಗ
ಇವುಗಳಲ್ಲಿ ಯಾವುದು ಸಂಭವಿಸುತ್ತದೆ ಎಂದು ನಾವು ಈಗ ಪ್ರತಿಕ್ರಿಯಿಸುವ ವಿಧಾನವನ್ನು ಅವಲಂಬಿಸಿರುತ್ತದೆ
ವೇಗದ ಸಾಂಕ್ರಾಮಿಕವು ಅನೇಕ ಜೀವಗಳನ್ನು ತೆಗೆದುಕೊಳ್ಳುತ್ತದೆ
ವೇಗದ ಸಾಂಕ್ರಾಮಿಕ ರೋಗವು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ
ಏಕೆಂದರೆ ಯಾವುದೇ ಸುರಕ್ಷತಾ ಕ್ರಮಗಳು ಇರುವುದಿಲ್ಲ
ಇದು ಗಂಭೀರ ಸಮಸ್ಯೆಯಾಗಿರಬಹುದು ಏಕೆಂದರೆ
ವೇಗವಾಗಿ ಹರಡುವ ಸಾಂಕ್ರಾಮಿಕದಲ್ಲಿ ಎಲ್ಲರೂ ಒಂದೇ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ
ಈ ಸಂಖ್ಯೆಗಳು ಸಾಕಷ್ಟು ದೊಡ್ಡದಾಗಿದ್ದರೆ ಆರೋಗ್ಯ ವ್ಯವಸ್ಥೆಯನ್ನು ಓವರ್‌ಲೋಡ್ ಆಗಬಹುದು
ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್‌ಗಳು ಮತ್ತು ಐಸಿಯು ಹಾಸಿಗೆಗಳು ಇಲ್ಲದಿರಬಹುದು
ಜನರು ಚಿಕಿತ್ಸೆ ಇಲ್ಲದೆ ಸಾಯಬಹುದು
ಮತ್ತು ಆರೋಗ್ಯ ಕಾರ್ಯಕರ್ತರು ಅನಾರೋಗ್ಯಕ್ಕೆ ಒಳಗಾಗಿದ್ದರೆ ವ್ಯವಸ್ಥೆಯು ಮತ್ತಷ್ಟು ಕುಸಿಯಬಹುದು
ಇದು ಸಂಭವಿಸಿದಲ್ಲಿ ಯಾರು ಬದುಕಬೇಕು ಮತ್ತು ಯಾರು ಸಾಯುತ್ತಾರೆ ಎಂಬ ಬಗ್ಗೆ ಬಹಳ ಕಷ್ಟಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
ಅಂತಹ ಪರಿಸ್ಥಿತಿಯಲ್ಲಿ ಸಾವಿನ ಸಂಖ್ಯೆ ಗಮನಾರ್ಹವಾಗಿ ಏರುತ್ತದೆ
ನಾವೆಲ್ಲರೂ ವೇಗವಾಗಿ ಹರಡುವ ರೋಗವನ್ನು ನಿಧಾನಗೊಳಿಸಲು ಪ್ರಯತ್ನಿಸಬೇಕು
ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವನ್ನು ಸರಿಯಾದ ಕ್ರಮಗಳಿಂದ ನಿಧಾನಗೊಳಿಸಬಹುದು
ವಿಶೇಷವಾಗಿ ಆರಂಭಿಕ ಹಂತದಲ್ಲಿ ಏಕೆಂದರೆ ಚಿಕಿತ್ಸೆಯ ಅಗತ್ಯವಿರುವವರು ಅದನ್ನು ಪಡೆಯಬಹುದು ಮತ್ತು ಆಸ್ಪತ್ರೆಗಳಿಗೆ ಹೊರೆಯಾಗುವುದನ್ನು ತಡೆಯಬಹುದು
ನಾವು ಕರೋನವೈರಸ್ಗೆ ಲಸಿಕೆ ಹೊಂದಿರದ ಕಾರಣ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ನಡವಳಿಕೆಗಳನ್ನು ನಾವು ಬದಲಾಯಿಸಬೇಕಾಗಿದೆ
ಈ ಪರಿಸ್ಥಿತಿಯಲ್ಲಿ ನಮ್ಮ ನಡವಳಿಕೆಯು ರೋಗದ ಹರಡುವಿಕೆಯನ್ನು ತಡೆಯಲು ಲಸಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದು
- ನಾವೇ ಸೋಂಕಿಗೆ ಒಳಗಾಗದಿರುವುದು
- ಇತರರಿಗೆ ಸೋಂಕು ಹರಡದಿರುವುದು
ಕೈ ತೊಳೆಯುವುದು ತುಂಬಾ ಸರಳವೆಂದು ತೋರುತ್ತದೆಯಾದರೂ ಮಾಡುವುದು ಉತ್ತಮ ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು
ಸಾಮಾನ್ಯವಾಗಿ ಲಭ್ಯವಿರುವ ಸೋಪ್ ಒಂದು ಶಕ್ತಿಯುತ ಆಯುಧವಾಗಿದೆ
ಕರೋನವೈರಸ್ ಅನ್ನು ಕೊಬ್ಬಿನ ಪದರ ಸುತ್ತುವರೆದಿದೆ
ಸೋಪ್ ಕೊಬ್ಬನ್ನು ನಾಶಪಡಿಸುತ್ತದೆ ಮತ್ತು ವೈರಸ್ ನಿಮಗೆ ಸೋಂಕಿಸದಂತೆ ಮಾಡುತ್ತದೆ
ಹಾಗು ಕೈಯಿಂದ ವೈರಲ್ ಕಣಗಳನ್ನು ತೆಗೆದುಹಾಕುತ್ತದೆ
ಆದ್ದರಿಂದ ನೀವು ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಬೇಕು
ಮುಂದಿನದು ಸಾಧ್ಯವಾದಷ್ಟು ಜನರಿಂದ ದೂರವಿರುವುದು; ಇದು ಅಹಿತಕರ ಅನುಭವವಾಗಬಹುದು ಆದರೆ ಮಾಡಬೇಕಾದ ಬಹಳ ಮುಖ್ಯವಾದ ವಿಷಯ
ಇದರರ್ಥ ಹ್ಯಾಂಡ್‌ಶೇಕ್‌ಗಳನ್ನು ಮಾಡದಿರುವುದು ಮತ್ತು ತಬ್ಬಿಕೊಳ್ಳದಿರುವುದು
ನೀವು ಮನೆಯಲ್ಲಿಯೇ ಇರಲು ಸಾಧ್ಯವಾದರೆ ಮನೆಯಲ್ಲಿಯೇ ಇರಿ ಇದರಿಂದ ಸಮಾಜದ ರಕ್ಷಣೆಗಾಗಿ ಕೆಲಸ ಮಾಡಬೇಕಾದವರು ತಮ್ಮ ಕೆಲಸವನ್ನು ಮುಂದುವರಿಸಬಹುದು
ವೈದ್ಯರಿಂದ ದಾದಿಯರಿಂದ ಹಿಡಿದು ಪೊಲೀಸ್ ಅಧಿಕಾರಿಗಳವರೆಗೆ; ನಿಮ್ಮನ್ನು ಸುರಕ್ಷಿತವಾಗಿಡಲು ನಿಮಗೆ ಅವರು ಬೇಕು. ಅನಾರೋಗ್ಯಕ್ಕೆ ಒಳಗಾಗದಂತೆ ಅವರೆಲ್ಲರೂ ನಿಮ್ಮನ್ನು ಅವಲಂಬಿಸಿದ್ದಾರೆ
ದೊಡ್ಡ ಮಟ್ಟದಲ್ಲಿ ಪ್ರಯಾಣ ನಿರ್ಬಂಧಗಳು ಮತ್ತು ಸಂಪರ್ಕತಡೆ ಇರಬಹುದು
ಸಂಪರ್ಕತಡೆಯನ್ನು ಹೊಂದಿರುವ ಜನರಿಗೆ ಇದು ಉತ್ತಮ ಅನುಭವವಲ್ಲ ಆದರೆ
ಇದು ವೈದ್ಯಕೀಯ ವೃತ್ತಿಪರರಿಗೆ ಮತ್ತು ಸಂಶೋಧಕರಿಗೆ ಚಿಕಿತ್ಸೆ ಅಥವಾ ಲಸಿಕೆಗಳನ್ನು ಕಂಡುಹಿಡಿಯಲು ಸಮಯವನ್ನು ನೀಡುತ್ತದೆ
ಆದ್ದರಿಂದ ನೀವು ನಿರ್ಬಂಧಿತರಾಗಿದ್ದರೆ ನೀವು ಅದನ್ನು ಗೌರವಿಸಬೇಕು ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು
ಇದು ತಮಾಷೆಯಾಗಿರದೆ ಇರಬಹುದು ಆದರೆ ದೊಡ್ಡ ದೊಡ್ಡ ಫಲಿತಾಂಶಗಳನ್ನು ಪಡೆಯಲು ಇದು ಒಂದು ಒಂದು ಸಣ್ಣ ಬೆಲೆಯಾಗಿರಬಹುದು
ಸಾಂಕ್ರಾಮಿಕ ರೋಗವು ಅದು ಹೇಗೆ ಪ್ರಾರಂಭವಾಗುತ್ತದೆಯೋ ಹಾಗೆ ಕೊನೆಗೊಳುತ್ತದೆ
ಕಡಿದಾದ ಏರಿಕೆಯೊಂದಿಗೆ ಪ್ರಾರಂಭಿಸಿದರೆ ಅವು ಹೆಚ್ಚಾಗಿ ಕೆಟ್ಟದಾಗಿ ಕೊನೆಗೊಳ್ಳುತ್ತವೆ
ಅದು ನಿಧಾನವಾಗಿ ಪ್ರಾರಂಭವಾದರೆ ಅದು ಕಡಿಮೆ ಹಾನಿಕಾರಕ ರೀತಿಯಲ್ಲಿ ಕೊನೆಗೊಳ್ಳುತ್ತದೆ
ಈ ಯುಗದಲ್ಲಿ ಅದು ನಮ್ಮ ಕೈಯಲ್ಲಿದೆ
ಅಕ್ಷರಶಃ
ಮತ್ತು ಸಾಂಕೇತಿಕವಾಗಿ
ಈ ವೀಡಿಯೊದೊಂದಿಗೆ ನಮಗೆ ಸಹಾಯ ಮಾಡಿದ ತಜ್ಞರಿಗೆ ಧನ್ಯವಾದಗಳು