ಜೀಎಂಓಗಳು ಒಳ್ಳೆಯವೋ ಕೆಟ್ಟವೋ ಎಂದು ಹೇಳಲು ಸಾಧ್ಯವೇ? ಜೀನೆಟಿಕ್ ಎಂಜಿನಿಯರಿಂಗ್ ಮತ್ತು ನಮ್ಮ ಆಹಾರ. | Kurzgesagt

🎁Amazon Prime 📖Kindle Unlimited 🎧Audible Plus 🎵Amazon Music Unlimited 🌿iHerb 💰Binance

ವೀಡಿಯೊ

ಸಂವಾದ

GMO ಗಳು ವಿಜ್ಞಾನದ ಅತ್ಯಂತ ವಿವಾದಾಸ್ಪದ ವಿಷಯಗಳ್ಲಲಿ ಒಂದಾಗಿವೆ .

ಜೆನೆಟಿಕ್ ಇಂಜಿನಿಯರಿಂಗನ್ನು ಹಲವು ಕ್ಷೇತ್ರಗಳ್ಲಲಿ ಬಳಸಲಾಗುತಿದ್ದು , GM ಇನ್ಸುಲಿನ್ ನಂತಹ ವ್ಯದ್ಯಕೀಯ ಅನ್ವಯಗಳು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದ್ದರೂ ,

ಆಹಾರ ಮತ್ತು ಕೃಷಿಯ ವಿಷಯ ಬಂದರೆ ಮಾತ್ರ ಬಿಸಿಬಿಸಿ ಚರ್ಚೆಯಗುತ್ತದೆ.

ಅದು ಯಾಕೆ?

ಒಂದೇ ವಿಷಯವಾದರೂ ವಿಭಿನ್ನ ರೀತಿಯಲ್ಲಿ ಪರಿಗಣಿಸಲ್ಪಟ್ಟಿದೆ ಯಾಕೆ ?

GMO ಗಳ ಪ್ರಾಮುಖ್ಯತೆ , ವಿಭಿನ್ನತೆ, ಸತ್ಯತೆ,ಅಸತ್ಯತೆ, ಭೀತಿ ಹಾಗು ಭವಿಷ್ಯವ ನ್ನುಆಳವಾಗಿ ಅರ್ಥ ಮಾಡಿಕೊಳ್ಳೋಣ!

ಸಾವಿರಾರು ವರ್ಷಗಳಿಂದ ಮಾನವರು ಸಸ್ಯಗಳು ಮತ್ತು ಪ್ರಾಣಿಗಳನ್ನು ತಳೀಯವಾಗಿ ಮಾರ್ಪಡಿಸುತ್ತಿದ್ದಾರೆ.

ಬಹುಶಃ ನಿಮ್ಮ ಕೆಲವು ಬೆಳೆಗಳು ಉತ್ತಮ ಇಳುವರಿಯನ್ನು ಹೊಂದಿದ್ದವು.

ಬಹುಶಃ ನಮ್ಮ ತೋಳಗಳಲ್ಲಿ ಕೆಲವು ವಿಶೇಷವಾಗಿ ನಿಷ್ಠಾವಂತ ವಾಗಿರಬಹುದು

ಆದ್ದರಿಂದ ನಾವು ನಮಗೆ ಅನುಕೂಲಕರವಾದ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯಗಳು ಮತ್ತು ಪ್ರಾಣಿಗಳನ್ನು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿದ್ದೀವಿ ಎಂದೆಣಿಸಿಕೊಳ್ಳೋಣ.

ಗುಣಲಕ್ಷಣಗಳು ವಂಶವಾಹಿಗಳ ಅಭಿವ್ಯಕ್ತಿಯನ್ನು ಸೂಚಿಸುತ್ತವೆ.

ಆದ್ದರಿಂದ ಪ್ರತಿ ತಲೆಮಾರಿನೊಂದಿಗೆ, ಆ ಜೀನ್ಗಳು ಹೆಚ್ಚು ಉಚ್ಚರಿಸಲ್ಪಟ್ಟಿವೆ.

ಸಾವಿರಾರು ವರ್ಷಗಳ ನಂತರ, ನಮ್ಮ ಸುತ್ತಲಿರುವ ಬಹುತೇಕ ಸಸ್ಯಗಳು ಮತ್ತು ಪ್ರಾಣಿಗಳು ಅದರ ಪೂರ್ವ-ಪ್ರೌಢಾವಸ್ಥೆಯ ಅಥವ ಹುಟ್ಟಿದಾಗಿನ ಗುಣಗಳಿಗಿಂತ ಭಿನ್ನವಾಗಿ ಮಾರ್ಪಾಟುಗೊಂಡಿವೆ .

ಮಾನವರು ಹೀಗೆ ಸಾವಿರ ವರ್ಷಗಳವರೆಗೆ ವಂಶವಾಹಿಗಳನ್ನು ಬದಲಿಸುತ್ತಿದ್ದರೆ, “ಜೆನೆಟಿಕಲಿ ಮಾರ್ಪಡಿಸಲಾಗಿರುವ ಜೀವಿ” ಅಥವಾ GMO ಎಂದು ಕರೆಯಲ್ಪಡುವ ಬೇರೆ ಯಾವುದು ಉಳಿಯುವುದು?

ಮೂಲವಾಗಿ ಆಯ್ದ ಸಂತಾನೋತ್ಪತ್ತಿಕ್ರಿಯೆ ಈಗ ಅದೃಷ್ಟದ ಬೆನ್ನೇರಿ ಕಾಯುತ್ತಾ ಆಶಿಸುತ್ತಿದೆ.

ಜೆನೆಟಿಕ್ ಇಂಜಿನಿಯರಿಂಗ್ ಈ ಕಾಯುವಿಕೆಯನ್ನು ನಿವಾರಿಸುತ್ತದೆ. ನಾವು ಬಯಸುವ ಲಕ್ಷಣ ಹಾಗು ಗುಣಗಳನ್ನು ನಾವು ಆಯ್ಕೆ ಮಾಡಬಹುದು.

ಹಣ್ಣುಗಳು ದೊಡ್ಡದಾಗಿವೆ ,

ಹಾಗೂ ಕ್ರಿಮಿಕೀಟಗಳಿಗೆ ಪ್ರತಿರೋಧಕವಾಗಿರುವಂತೆ ಮಾರ್ಪಾಟುಗೊಂಡಿವೆ

ಆದರೆ , ಜನರಿಗೆ ಈ ವಿಷಯದ ಬಗ್ಗೆ ಏಕೆ ಕಾಳಜಿ?

GMO ಗಳ ಮೇಲೆ ಹೇರಿರುವ ಸಾಮಾನ್ಯವಾದ ಆಕ್ಷೇಪಣೆಗಳಲ್ಲಿ ಒಂದನ್ನು ವಿಶ್ಲೇಷಿಸೋಣ.

ಜೀನ್ ಹರಿವು ಅಂದರೆ GM ಬೆಳೆಗಳು ಸಾಂಪ್ರದಾಯಿಕ ಬೆಳೆಗಳೊಂದಿಗೆ ಮಿಶ್ರಣಗೊಂಡು ಅನಗತ್ಯವಾದ ಹೊಸ ಗುಣಲಕ್ಷಣಗಳನ್ನು ಹೊಂದು ಕೊಳ್ಳಬಹುದು.

ಸಂಪೂರ್ಣ ತಡೆಗಟ್ಟುವಿಕೆಯನ್ನು ಖಾತರಿಪಡಿಸುವ ಒಂದು ವಿಧಾನವಿದೆ ಆದರೆ ಇದು ಸ್ವತಃ ಒಂದು ದೊಡ್ಡ ವಿರೋಧಿ GMO ವಾದವಾಗಿದೆ.

ಟರ್ಮಿನೇಟರ್ ಬೀಜಗಳು.

ಇದರಿಂದ ಬರಡಾದ ಸಸ್ಯಗಳ ಉತ್ಪಾದನೆ ಗೊಳ್ಳ ಬಹುದಾದ ಪರಿಕಲ್ಪನೆ ಮತ್ತು ರೈತರು ಪ್ರತಿವರ್ಷವೂ ಹೊಸ ಬೀಜಗಳನ್ನು ಖರೀದಿಸಬೇಕಾದ ಪರಿಸ್ಥಿಥಿ

ಆದಾಗ್ಯೂ, ಈ ಪರಿಕಲ್ಪನೆಯು ಸಾರ್ವಜನಿಕ ಪ್ರತಿಭಟನೆಗೆ ಕಾರಣವಾಯಿತು, ತಂತ್ರಜ್ಞಾನವನ್ನು ಬಳಸುವುದನ್ನು ನಿಲ್ಲಿಸಿತು.

ಇದರಿಂದಾಗಿ ಎಂಜಿನಿಯರಿಂಗ್ ಆದ ಡಿಎನ್ಎಯ ಅನುದ್ದೇಶಿತ ಹರಡುವಿಕೆಗೆ ಕಾರಣವಾಗಿ ತೊಂದರೆ ಮರುಕಳಿಸಿದೆ.

GMO ಗಳು ಭಿತ್ತದಿರುವ ಸ್ಥಳಗಳಲ್ಲಿ ಬೆಳೆಯುತ್ತಿವೆ ಮತ್ತು ವಿದೇಶಿ ಬೆಳೆಗಳಲ್ಲಿ ಕಂಡುಬರುವ ಮಾರ್ಪಡಿಸಿದ ವಂಶವಾಹಿಗಳ ಕುರುಹುಗಳು ಕಂಡುಬಂದಿದೆ.

ಆದರೆ GM ಸಸ್ಯಗಳು ಸಂಪೂರ್ಣವಾಗಿ ಕಾಡು ಚಲಾಯಿಸಲು ಸಾಧ್ಯವಿಲ್ಲ.

ಅನೇಕ ಬೆಳೆಗಳು ತಮ್ಮೊಳಗೆ ಪರಾಗಸ್ಪರ್ಶ ಹೊಂದುತ್ತವೆ, ಮತ್ತು ಎಲ್ಲಾ ಬೆಳೆಗಳನ್ನು ಬೆರೆಯುವಿಕೆಯೊಂದಿಗೆ ಸಂಬಂಧಿಸಬೇಕಾಗಿದೆ.

ಬಫರ್ ವಲಯಗಳಂತಹ ಸಾಂಸ್ಕೃತಿಕ ವಿಧಾನಗಳೂ ಸಹ ಅನುದ್ದೇಶಿತ ದಾಟುವಿಕೆಯನ್ನು ಕನಿಷ್ಠವಾಗಿರಿಸಲು ಸಹಕಾರಿಯಾಗಿವೆ.

ಆದರೆ GMO ಉದ್ದೇಶಪೂರ್ವಕವಾಗಿ ಒಂದು GM ಅಲ್ಲದ ಬೆಳೆಯೊಂದಿಗೆ ಹೊಂದಿಕೆಯಾಗಲು ಸಾಧ್ಯತೆ ಇದೆ ಎಂದು ತಾತ್ವಿಕವಾಗಿ ಸಾಬೀ ತಾದರೆ,

ಹೆಚ್ಚು ಮುಖ್ಯವಾದ ಪ್ರಶ್ನೆಯೊಂದು ಎದುರಾಗಲಿದೆ!

GM- ಬೆಳೆಗಳಿಂದ ತಯಾರಾದ ಆಹಾರವು, ಸಾಮಾನ್ಯ ಬೆಳೆಗಳಿಂದ ತಯಾರಾಗುವ ಆಹಾರಕ್ಕಿಂತ ವಿಭಿನ್ನವಾಗಿದೆಯೇ?

ಈ ಪ್ರಶ್ನೆ ಮೊದಲಿಂದಲೂ ಒಂದು ಪ್ರಮುಖ ಕಾಳಜಿಯತವಾದ ಪ್ರಶ್ನೆ!

ತಿನ್ನಲು ಉಪಯೋಗಿಸುವ GM ಗಿಡಗಳನ್ನು, ಸಂಭವನೀಯ ಅಪಾಯಗಳಿಗೆ ಪರೀಕ್ಷಿಸಲಾಗುತ್ತದೆ ಮತ್ತು ಇದರ ಫಲಿತಾಂಶಗಳನ್ನು ಅನೇಕ ಏಜೆನ್ಸಿಗಳು ಮೌಲ್ಯಮಾಪನ ಮಾಡುತ್ತವೆ.

ಸಾವಿರಾರು ಅಧ್ಯಯನಗಳ ವಿಜ್ಞಾನವು, ಸುಮಾರು 30 ವರ್ಷಗಳ ನಂತರ ನಮಗೆ ಲಭ್ಯವಾಗಿವೆ.

GMO ಸಸ್ಯಗಳನ್ನು ತಿನ್ನುವುದು, GM ಅಲ್ಲದ ಸಸ್ಯಗಳನ್ನು ತಿನ್ನುವುದಷ್ಟೇ ಅಪಾಯಕಾರಿ.

ಆದರೆ ನಾವು ಹೇಳಿದ್ದೇವೆಂದು ನಂಬಬೇಡಿ, ಈ ಮುಖಾಂತರ ನೀಡುವ ಮಾಹಿತಿ,ವಿಚಾರ ಮತ್ತು ಇತರ ಹಕ್ಕುಗಳ ಮೂಲಗಳು ವೀಡಿಯೊ ವಿವರಣೆಯಲ್ಲಿವೆ.

ಆದರೆ ವಿಷಕಾರಿ ಎಂದು ವಿನ್ಯಾಸಗೊಂಡ ಸಸ್ಯಗಳ ಬಗ್ಗೆ ಏನು ತಿಳಿದುಕೊಂಡಿರುವಿರಿ ?

ಉದಾಹರಣೆಗೆ, BT ಬೆಳೆಗಳು.

ಬ್ಯಾಕ್ಟೀರಿಯಮ್ ಬ್ಯಾಸಿಲಸ್ ತುರಿಂಜಿಯೆನ್ಸಿಸ್ನಿಂದ ಎರವಲು ಪಡೆದ ಒಂದು ಜೀನ್, ಜೆನೆಟಿಕ್ ಇಂಜಿನಿಯರಿಂಗ್ ಸಸ್ಯಗಳ, ನಿರ್ದಿಷ್ಟವಾದ ಕೀಟಗಳ ಜೀರ್ಣಕಾರಿ ವ್ಯವಸ್ಥೆಯನ್ನು ನಾಶಪಡಿಸುವ ಪ್ರೊಟೀನ್ ಅನ್ನು ಉತ್ಪಾದಿಸುತ್ತದೆ

ಈ ಸಸ್ಯವು ತನ್ನದೇ ಆದ ಕೀಟನಾಶಕವನ್ನು ತಯಾರು ಮಾಡುತ್ತದೆ.

ಅದನ್ನು ತಿನ್ನುವ ಕೀಟಗಳು ಸಾಯುತ್ತವೆ.

ಇದು ಕಟ್ಟೆಚ್ಚರ ಮೂಡಿಸುವ ಅಪಾಯಕಾರಿ ವಿಷಯ!

ಸಸ್ಯಗಳ ಮೇಲಿನ ಕೀಟನಾಶಕ ದ್ರವಗಳನ್ನು ತೊಳೆದುಕೊಳ್ಳಬಹುದು.

ಬಿಟಿ ಬೆಳೆಗಳಲ್ಲಿರುವ ವಿಷವು ಸಸ್ಯದ ಒಳಭಾಗದಲ್ಲಿದೆ.

ಆದರೆ ವಾಸ್ತವವಾಗಿ, ಇದು ಒಂದು ದೊಡ್ಡವಿಶೇಷವಾದ ವ್ಯವಹಾರವೇನಲ್ಲ.

ವಿಷಯುಕ್ತವಾದುದೆಂಬುದು ವಿಭಿನ್ನ ದೃಷ್ಟಿಕೋನಗಳಗೊಂಡ ಅಭಿಪ್ರಾಯವಷ್ಟೆ.

ಒಂದು ಜಾತಿಗೆ ಹಾನಿಕಾರಕವಲ್ಲದಿದ್ದರೂ , ಇನ್ನೊಂದನ್ನು ಕೊಲ್ಲಬಹುದು.

ಉದಾಹರಣೆಗೆ, ಕಾಫಿ, ಕೀಟಗಳನ್ನು ಕೊಲ್ಲುತ್ತದೆ ಆದರೆ ನಮಗೆ ಹಾನಿಕಾರಕವಲ್ಲ.

ಅಥವಾ ಚಾಕೊಲೇಟ್ ತೆಗೆದುಕೊಳ್ಳಿ, ಇದು ನಾಯಿಗಳಿಗೆ ಅಪಾಯಕಾರಿ ಆದರೆ ಮನುಷ್ಯರಿಗೆ ಪ್ರಿಯವಾದುದು .

BTಬೆಳೆಗಳು ಕೆಲವು ಕೀಟಗಳ ಜೀರ್ಣಾಂಗಗಳ ನಿರ್ದಿಷ್ಟ ವಿನ್ಯಾಸಕ್ಕೆ ಅನುಗುಣವಾದ ಪ್ರೊಟೀನ್ ಅನ್ನು ಉತ್ಪಾದಿಸುತ್ತವೆ; ಇದು ನಮಗೆ ಸಂಪೂರ್ಣವಾಗಿ ಹಾನಿಕಾರಕವಲ್ಲ .

ಇದಕ್ಕೆ ವಿರುದ್ಧವಾದ ವಿಧಾನವೂ ಇದೆ.

ಅದೇನೆಂದರೆ, ಕೆಲವು ಸಸ್ಯಗಳು ಕಳೆ ತೆಗೆಯುವಲ್ಲಿ, ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ

ಸಂಪನ್ಮೂಲಗಳಿಗಾಗಿ ಸ್ಪರ್ಧಿಸುವ ಇತರ ಸಸ್ಯಗಳನ್ನು ಕೊಂದು ಬೆಳೆಗೆ ಹಾನಿಯಾಗದಂತೆ.ನೋಡಿಕೊಳ್ಳುವ ಈ ಸಸ್ಯಗಳನ್ನು ರೈತರು ವ್ಯಾಪಕವಾಗಿ ಬಳಸಿಕೊಳ್ಳಬಹುದು.

ಇಲ್ಲಿ, ನಾವು GMO ಗಳ ಕರಾಳ ಅವಶೇಷದ ಬಗ್ಗೆ ಅರ್ಥ ಮಾಡಿಕೊಳ್ಳೋಣ

ಕೀಟನಾಶಕ ಉದ್ಯಮಕ್ಕಾಗಿ GMO ಗಳು ಬಹು ದೊಡ್ಡ ವ್ಯವಹಾರಗಳಾಗಿವೆ.

US ನ ಎಲ್ಲಾ ನಗದು ಬೆಳೆಗಳಲ್ಲಿ ಹೆಚ್ಚಾಗಿ, 90% ಕ್ಕಿಂತ ಹೆಚ್ಚು ಗ್ಲೈಫೋಸೇಟ್ಎಂಬ ಸಸ್ಯನಾಶಕ ನಿರೋಧಕವಾಗಿದೆ,

ಪರಿಣಾಮವಾಗಿ, ಗ್ಲೈಫೋಸೇಟ್ ಬಳಕೆಯು ಹೆಚ್ಚಾಗಿದೆ.

ಅದು ಕೆಟ್ಟದ್ದಲ್ಲ, ಅನೇಕ ಇತರ ಸಸ್ಯನಾಶಕಗಳಿಗಿಂತ ಗ್ಲೈಫೋಸೇಟ್ ಮಾನವರಿಗೆ ಕಡಿಮೆ ಹಾನಿಕಾರಕವಾಗಿದೆ.

ಆದರೂ, ರೈತರು ಈ ವಿಧಾನವನ್ನು ಬಲವಾಗಿ ಅವಲಂಬಿಸಿ , ಕಳೆಗಳ ನಿರ್ಮೂಲನೆಯನ್ನು ನಿರ್ವಹಿಸುವ ಹೆಚ್ಚು ಸಮತೋಲಿತ ವಿಧಾನಗಳನ್ನು ಬಿಟ್ಟು ಬಿಡುತ್ತಾರೆ ಎಂದರ್ಥ.

ಇದು GMO ಕುರಿತ ಚರ್ಚೆಯಲ್ಲಿ, ವಿಶ್ಲೇಷಣೆಗೊಳ್ಳುವ ಅತ್ಯಂತ ಮೂಲಭೂತ ಸಮಸ್ಯೆಗಳಲ್ಲಿ ಒಂದಾಗಿದೆ.

ಈ ತಂತ್ರಜ್ಞಾನದ ಹೆಚ್ಚಿನ ವಿಮರ್ಶೆ, ವಾಸ್ತವವಾಗಿ ಆಧುನಿಕ ಕೃಷಿಗಾರಿಕೆ ಮತ್ತು ನಮ್ಮ ಆಹಾರ ಪೂರೈಕೆಯನ್ನು ನಿಯಂತ್ರಿಸುವ ಬೃಹತ್ ನಿಗಮಗಳ ವ್ಯಾಪಾರವನ್ನು,ಟೀಕಿಸುವ ವಿಧಾನವಾಗಿದೆ .

ಈ ಟೀಕೆ ಮಾನ್ಯ ಹಾಗು ಬಹು ಮುಖ್ಯವಾದುದಾಗಿದೆ.

ನಾವು ಕೃಷಿಯನ್ನು ಹೆಚ್ಚು ಸಮರ್ಥನೀಯ ಮಾದರಿಗೆ ಬದಲಾಯಿಸಬೇಕಾಗಿದೆ.

ವಾಸ್ತವವಾಗಿ GMO ಗಳ ತಂತ್ರಜ್ಞಾನ, ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಪರಿಸರದ ಮೇಲಾಗುವ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ಕೆಲವು ಧನಾತ್ಮಕ ಉದಾಹರಣೆಗಳು ನೋಡೋಣ.

ಬಿಳಿಬದನೆ ಬಾಂಗ್ಲಾದೇಶದಲ್ಲಿ ಒಂದು ಪ್ರಮುಖ ಬೆಳೆ, ಆದರೆ ಸಾಮಾನ್ಯವಾಗಿ, ಸಂಪೂರ್ಣ ಫಸಲು ಕೀಟಗಳಿಂದ ನಾಶವಾಗುತಿತ್ತು .

ರೈತರು ಕೀಟನಾಶಕಗಳನ್ನು ಹೆಚ್ಚಾಗಿ ಅವಲಂಬಿಸುತಿದ್ದರು .

ಇದು ತುಂಬಾ ದುಬಾರಿ,

ರೈತರು ಹೆಚ್ಚು ಕೀಟನಾಶಕಗಳ ಉಪಯೋಗದಿಂದ . ಆಗಾಗ್ಗೆ ರೋಗ ಪೀಡಿತರಾಗುತಿದ್ದರು

2013 ರಲ್ಲಿ ಹೊಸ GM ಬಿಳಿಬದನೆ ಪರಿಚಯದಿಂದ ಈ ಅನಾರೋಗ್ಯವನ್ನು ನಿಲ್ಲಿಸಿತು.

ನಾವು ಈ ಮೊದಲು ಮಾತನಾಡಿದ , ಕೀಟಗಳ ಮೇಲೆ ವಿನಾಶಕಾರಿ ಪರಿಣಾಮವಿರುವ, ಆದರೆ ಮಾನವರಿಗೆ ಹಾನಿಕಾರಕವಲ್ಲದ , BT ಪ್ರೋಟೀನ್ ಗಳನ್ನು ಬಿಳಿಬದನೆ ಒಳಗೆ ವಿನ್ಯಾಸಗೊಳಿಸಲಾಗಿತ್ತು.

ಇದರಿಂದ 80% ಕ್ಕಿಂತ ಹೆಚ್ಚಿನಷ್ಟು ಕೀಟನಾಶಕದ ಉಪಯೋಗವನ್ನು ಕಡಿಮೆ ಮಾಡಲಾಯಿತು ರೈತರ ಆರೋಗ್ಯ ಸುಧಾರಣೆಯಾಯಿತು ಮತ್ತು ಬಿಳಿಬದನೆಯ ಆದಾಯ ಬಹಳಷ್ಟು ಹೆಚ್ಚಿತು .

ಹೀಗೆ ಕೆಲವೊಮ್ಮೆ, GM ವಿಧಾನವೊಂದೆ ಆಯ್ಕೆ ಮಾಡುವ ಪರಿಸ್ಥಿತಿ ಒದಗುವುದು !

1990 ರ ದಶಕದಲ್ಲಿ ಹವಾಯಿಯ ಪಪ್ಪಾಯಿ ಉದ್ಯಮವು ರಿಂಗ್ಸ್ಪಾಟ್ ವೈರಸ್ನಿಂದ ಆಕ್ರಮಣಕ್ಕೊಳಗಾಯಿತು. ಇದು ಹವಾಯಿಯನ್ ಪಪ್ಪಾಯಿಯ ಸಂಪೂರ್ಣ ನಾಶವಾಗುವ ಬೆದರಿಕೆ ಒಡ್ಡಿತು.

ಈ ವೈಪಲ್ಯಕ್ಕೆ ಕಾರಣವಾಗಿದ್ದ ವೈರಸ್ ನ ವಿರುದ್ಧ ವ್ಯಾಕ್ಸಿನೇಷನ್ ಮಾಡಲು ಪಪಾಯಿಯ ತಳೀಯನ್ನು ಬದಲಾಯಿಸಲಾಯಿತು. ಹೀಗೆ ಮಾಡದಿದ್ದರೆ ಪಪ್ಪಾಯಿ ಉದ್ಯಮ ಕುಸಿದು ಹೋಗುತಿತ್ತು .

ಈ ಎಲ್ಲಾ ಕಥೆಗಳು ಬಹಳ ಕಿರಿದಾದ ಅನ್ವಯವನ್ನು ತೋರಿಸುತ್ತವೆ. ನಾವು ಬಳಸುವ ಎಲ್ಲಾ GMO ಗಳು 99% ಕೀಟನಾಶಕಗಳನ್ನು ಉತ್ಪತ್ತಿ ಮಾಡುತ್ತವೆ ಅಥವಾ ಅವುಗಳ ವಿರುದ್ಧ ನಿರೋಧಕವಾಗಿರುತ್ತವೆ .

GMO ಗಳ ಬಳಕೆಯಿಂದ ಇನ್ನು ಹೆಚ್ಚುಉಪಯೋಗವಿದೆ. ವಿಜ್ಞಾನಿಗಳು ನಮ್ಮ ಆಹಾರವನ್ನು ಸುಧಾರಿಸುವ GMO ಗಳ ಸಂಶೋಧನೆ ಮಾಡುತ್ತಿದ್ದಾರೆ.

ಹೆಚ್ಚು ಅಥವಾ ವಿಭಿನ್ನ ಪೋಷಕಾಂಶಗಳನ್ನು ಉತ್ಪತ್ತಿ ಮಾಡುವ ಸಸ್ಯಗಳು, ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಹೆಚ್ಚಿನ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೊಂದಿರುವ ಹಣ್ಣುಗಳು

ಅಥವಾ ಹೆಚ್ಚುವರಿ ಜೀವಸತ್ವಗಳನ್ನೊಳಗೊಂಡ ಅಕ್ಕಿ ಮುಂತಾದವು.

ನಾವು ದೊಡ್ಡ ಪ್ರಮಾಣದಲ್ಲಿ, ಹವಾಮಾನ ಬದಲಾವಣೆಗೆ ಹೆಚ್ಚು ಚೇತರಿಸಿಕೊಳ್ಳುವ ಸಸ್ಯಗಳನ್ನು ಎಂಜಿನಿಯರ್ ಮಾಡಲು ಪ್ರಯತ್ನಿಸುತ್ತಿದ್ದೇವೆ,

ಅನಿಯಮಿತ ಹವಾಮಾನ ಮತ್ತು ಪ್ರತಿಕೂಲ ಮಣ್ಣಿನ ಪರಿಸ್ಥಿತಿಗಳಿಗೆ ಸರಿಯಾಗಿ ಹೊಂದಿಕೊಳ್ಳುವ ಸಸ್ಯಗಳು,

ಬರಗಾಲ ಅಥವಾ ಪ್ರವಾಹವನ್ನು ಎದುರಿಸಲು ಸಹಾಯಕವಾಗುತ್ತವೆ

GMO ಗಳು ಪರಿಸರದ ಮೇಲೆ ಕೃಷಿಯ ಪ್ರಭಾವವನ್ನು ಕಡಿಮೆಗೊಳಿಸುವುದಿಲ್ಲ ಆದರೆ ಅದನ್ನು ರಕ್ಷಿಸಲು ಸಕ್ರಿಯವಾಗಿ ಸಹಾಯ ಮಾಡಬಲ್ಲದು .

ವಿಜ್ಞಾನಿಗಳು ಸೂಕ್ಷ್ಮಜೀವಿಗಳಂತೆ ಗಾಳಿಯಿಂದ ಸಾರಜನಕವನ್ನು ಸೆಳೆಯಬಲ್ಲ ಬೆಳೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾರಜನಕ ಒಂದು ಸಾಮಾನ್ಯ ರಸಗೊಬ್ಬರವಾಗಿದ್ದು, ಅದರ ರಚನೆಯು ಅಂತರ್ಜಲವನ್ನು ಮಾಲಿನ್ಯಗೊಳಿಸುತ್ತದೆ ಮತ್ತು ವಾತಾವರಣದ ಬದಲಾವಣೆಯನ್ನು ಹೆಚ್ಚಿಸುತ್ತದೆ.

ತಮ್ಮ ಸಾರಜನಕವನ್ನು ಸಂಗ್ರಹಿಸಿಡುವ ಸಸ್ಯಗಳು ಎರಡು ಸಮಸ್ಯೆಗಳನ್ನು ಒಂದೇ ಬಾರಿಗೆ ಸರಿಪಡಿಸಬಹುದು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ರಸಗೊಬ್ಬರಗಳ ಮಿತಿಮೀರಿದ ಬಳಕೆ, ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರ ಕೊರತೆಯನ್ನು ನೋಡುತಿದ್ದೇವೆ .

ಅಮೆರಿಕದ ಚೆಸ್ಟ್ನಟ್ ಮರದಂತಹ ಸೂಪರ್-ಪರಿಣಾಮಕಾರಿ ಕಾರ್ಬನ್ ಸಂಗ್ರಾಹಕವಾಗಲು ಸಸ್ಯಗಳನ್ನು ನಾವು ಮಾರ್ಪಡಿಸಬಹುದು ಮತ್ತು ವಾತಾವರಣದ ಬದಲಾವಣೆಯನ್ನು ತಗ್ಗಿಸಲು ಸಹಕಾರಿಯಾಗುವಂತೆ ಮಾಡಬಹುದು .

ನಮ್ಮಲ್ಲಿರುವ ಪ್ರಸ್ತುತ ಸಾಧನ, ಉಪಕರಣಗಳಿಗೆ , ನಮ್ಮ ಕಲ್ಪನೆಯೇ ಮಿತಿ.

ಪ್ರಪಂಚಕ್ಕೆ ಪ್ರತಿದಿನ 11 ಮಿಲಿಯನ್ ಪೌಂಡುಗಳಷ್ಟು ಆಹಾರ ಬೇಕಾಗುತ್ತದೆ

UN ಅಂದಾಜು ಮಾಡಿರುವ ಪ್ರಕಾರ 2050 ರ ಇಸವಿಗೆ , ನಮಗೆ 70% ಹೆಚ್ಚು ಅಹಾರ ಬೇಕಾಗುತದೆ .

ನಾವು ಹೆಚ್ಚಿನ ಆಹಾರವನ್ನು ಬೆಳೆಸಲು ಕಾಡಿನಲ್ಲಿರುವ ಜಾಗವನ್ನು ತೆರವುಗೊಳಿಸುವುದು ಮತ್ತು ಹುಲ್ಲುಗಾವಲುಗಳನ್ನು ಸೃಷ್ಟಿಸಲು ಉಪಯೋಗಿಸುವುದು ಮತ್ತು ಹೆಚ್ಚು ಕ್ರಿಮಿನಾಶಕಗಳನ್ನು ಬಳಸುವುದರ ಮೂಲಕ ಪಡೆಯಬಹುದು

ಅಥವಾ GM ಗಿಡಗಳಂತಹ ಹೆಚ್ಚು ಪರಿಣಾಮಕಾರಿ ವಿಧಾನಗಳೊಂದಿಗೆ ನಾವಿದೀಗ ಇರುವ ಜಾಗದಲ್ಲಿಯೇ ಮಾರ್ಗವನ್ನು ಕಂಡುಕೊಳ್ಳಬಹುದು .

ಈ ಕೃಷಿಯನ್ನು ವಿಸ್ತರಿಸುವ ಬದಲು ತೀವ್ರಗೊಳಿಸುವುದು ಎಂದರೆ GMO ಗಳು ಹೊಸ ಸಾವಯವವಾಗಬಹುದು.

ಸಂಕ್ಷಿಪ್ತವಾಗಿ, GMO ಗಳು ಸಂಪೂರ್ಣವಾಗಿ ಕೃಷಿಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುವುದು ಹಾಗು ನಮ್ಮದೇ ಆದ ಬೇಜವಾಬ್ದಾರಿಯುತ ನಡವಳಿಕೆಯ ಪರಿಣಾಮಗಳನ್ನು ಕೂಡಾ ತಗ್ಗಿಸಬಹುದು.

GMO ಗಳು ನಮ್ಮ ಜೀವಗೋಳವನ್ನು ಉಳಿಸಲು ನಮ್ಮಲ್ಲಿರುವ ಶಕ್ತಿಶಾಲಿ ಶಸ್ತ್ರಾಸ್ತ್ರಗಳಾಗಿರಬಹುದು.

ಈ ವೀಡಿಯೊವನ್ನು ತಯಾರಿಸಲು 600 ಕ್ಕಿಂತ ಹೆಚ್ಚು ಗಂಟೆಗಳು ಬೇಕಾಯಿತು , ವೀಕ್ಷಕರ ಬೆಂಬಲದಿಂದ Patreon.com ನಲ್ಲಿ ಪ್ರಕಟಗೊಂಡಿದೆ

ಪ್ರೀತಿಯಿಂದ ಮಾಡಲ್ಪಟ್ಟಈ ವಿಡಿಯೋ ಮತ್ತು ಜಾಗರೂಕವಾಗಿ ಸಂಶೋಧನೆ ಮಾಡಲಾದ ವಿಷಯವನ್ನು ಬೆಂಬಲಿಸಲು ನೀವು ಬಯಸಿದರೆ, ನಿಜವಾಗಿಯೂ ತುಂಬಾ ಉಪಕಾರವಾಗುವುದು !

ಮತ್ತು ನಿಮ್ಮ ಸ್ವಂತ ಹಕ್ಕಿ ಪ್ರತಿಫಲವಾಗಿ ನೀವು ಪಡೆಯಬಹುದು.

ಆನುವಂಶಿಕ ಮಾರ್ಪಾಡಿನ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ತಂತ್ರಜ್ಞಾನದ ಅವಕಾಶಗಳು ಮತ್ತು ಅಪಾಯಗಳನ್ನುಮತ್ತು ಅದು ನಮ್ಮ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ವಿವರಿಸುವ ಹೆಚ್ಚಿನ ವೀಡಿಯೋಗಳನ್ನು ನಾವು ಹೊಂದಿದ್ದೇವೆ .

ಶೀರ್ಷಿಕೆ ಯ ಸಹಾಯಕರರ ಮಾಹಿತಿ ವಿವರಣೆಯಲ್ಲಿವೆ.

As an Amazon Associate I earn from qualifying purchases 🛒
ಇದರೊಂದಿಗೆ ನಿರ್ಮಿಸಲಾಗಿದೆ (ノ◕ヮ◕)ノ🪄💞💖🥰 across the gl🌍🌏🌎be